ಭಕ್ತ ಮಹಾಶಯರೇ ಸ್ವಸ್ತಿ ಶ್ರೀ ಶುಭಕೃತು ಸಂವತ್ಸರದ ದಕ್ಷಿಣಾಯಣ ವೃಶ್ಚಿಕ ಮಾಸ 19 ಸಲುವು ತಾ.05-12-2022ನೇ ಸೋಮವಾರದಿಂದ ತಾ. 08.12.2022ನೇ ಗುರುವಾರದ ತನಕ ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಎಡನೀರು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ನವಾವರಣಕೀರ್ತನೆಗಳೊಂದಿಗೆ ಶತಚAಡಿಕಾ ಯಾಗ ಹಾಗೂ ಶ್ರೀ ಚಕ್ರಪೂಜೆ ಮಾಡುವುದಂದು ನಿಶ್ಚೆöÊಯಿಸಲಾಗಿದೆ. ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಸಕುಟುಂಬ ಸಮೇತರಾಗಿ ಆಗಮಿಸಿ ತನು, ಮನ, ಧನಗಳಿಂದ ಸಹಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ. ,ಮಾಗಣೆ ಕೂಟ ಹಾಗು ಮಾಗಣೆ ಹತ್ತು ಸಮಸ್ತರು.