Hot Widget


Qries
Type Here to Get Search Results !

Qries

ಏಪ್ರಿಲ್ 19 ರಂದು ಸಂಜೆ 7 ಗಂಟೆಗೆ ಐಲದಲ್ಲಿ ಶಾರದಾ ಆರ್ಟ್ಸ್... -ಯಾನ್ ಉಲ್ಲೆತ್ತಾ- ಐವತ್ತರ ಸಂಭ್ರಮ

 
    ಗಡಿನಾಡಿನ ಹೆಮ್ಮೆಯ ನಾಟಕ ತಂಡಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ .... ರಂಗ ಪಯಣದ 24 ನೇ ವರ್ಷದತ್ತ ಕಾಲಿಡುತ್ತಿರುವ ದಿಗ್ಗಜ ಕಲಾವಿದರ ಗಜತಂಡ.

ಈ ವರ್ಷದ ಕಲಾಕಾಣಿಕೆ ಶಾರದಾ ಆರ್ಟ್ಸ್ ನ ಯಶಸ್ಸಿನ ಮುಕುಟಕ್ಕೆ ಮತ್ತೊಂದು ಗರಿ ಸೇರಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ಹೆಸರಿಗೊಪ್ಪುವ ಕಥೆ, ಪಾತ್ರಕ್ಕೆ ಒಪ್ಪುವ ಕಲಾವಿದರು, ಮನಸ್ಸಿಗೆ ನಾಟುವಂತ ಸಂಭಾಷಣೆ.... ಇದು ಯಾನ್ ಉಲ್ಲೆತ್ತಾ ನಾಟಕದ ಒಂದು ಸಾಲಿನ ವಿಮರ್ಶೆ.

ಕಥೆಯ ಚೌಕಟ್ಟು ಬಿಟ್ಟು ಯಾವುದೇ ಸಂಭಾಷಣೆಯನ್ನು ಹಾಕಿಕೊಳ್ಳದೆ ಹಳ್ಳಿ ಮತ್ತು ನಗರ ಜೀವನದ ಮಾರ್ಮಿಕ ವ್ಯತ್ಯಾಸಗಳನ್ನು ಅರ್ಥಪೂರ್ಣವಾಗಿ ಪ್ರಯೋಗಿಸಿದ ಸಂಭಾಷಣಕಾರನ ಶಬ್ಧಭಂಡಾರದ ಸಂಪತ್ತು ಒಟ್ಟು ನಾಟಕದಲ್ಲಿ ಎದ್ದು ಕಾಣುತ್ತದೆ.

ತನ್ನದೇ ತಂಡದಲ್ಲಿ ಮೊದಲ ಬಾರಿಗೆ ಸಿಕ್ಕಿದ ನಿರ್ದೇಶನದ ಜವಾಬ್ದಾರಿಯನ್ನು  ಸೈಮಾ ಅವಾರ್ಡ್ ವಿಜೇತ  ಕಲಾವಿದ ಕಲಾ ಸೌರಭ ಶ್ರೀ ಪ್ರಕಾಶ್ ಕೆ ತೂಮಿನಾಡು ಸಮರ್ಥವಾಗಿ ನಿಭಾಯಿಸಿದ್ದಾರೆ. 50 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿ ಸಿಕ್ಕಿದ ಅನುಭವದಲ್ಲಿ ಬೇಕು ಬೇಡಗಳನ್ನು ಆಲೋಚಿಸಿ ನಾಟಕವನ್ನು ನಿರ್ದೇಶಿಸಿದ್ದಾರೆ.




ನಾಟಕೀಯವಾದ ಅಭಿನಯ ಇಲ್ಲದೆ ನೈಜತೆಗೆ ಒತ್ತು ನೀಡಿ ಯಾವುದೇ ಹಂತದಲ್ಲೂ ಪ್ರೇಕ್ಷಕರಲ್ಲಿ ಆಲಸ್ಯ ಮೂಡಿಸದೆ ಕೊನೆಯವರೆಗೂ ಕಲಾಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಅನ್ನಬಹುದು.  ಅಭಿನಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲಾ ಕಲಾವಿದರ ರಂಗ ಪ್ರಬುದ್ಧತೆ ಮೆಚ್ಚುವಂತದ್ದೆ.

ವಿಶೇಷ ರೀತಿಯ ರಂಗ ವಿನ್ಯಾಸದಲ್ಲಿ ಮಾಡಿದ ದೈವದ ಕಟ್ಟೆಯನ್ನು ನಾಟಕ ಮುಗಿದ ನಂತರ ಹತ್ತಿರದಿಂದ ನೋಡಲು ಹೋದಾಗ ನನಗರಿವಿಲ್ಲದೆ ಪಾದರಕ್ಷೆ ಕಳಚಿದೆ; ಅಷ್ಟೊಂದು ನೈಜವಾಗಿತ್ತು.

ತುಳುನಾಡ ಕಲಾಬಿರ್ಸೆ ಶ್ರೀ ದೀಪಕ್ ರೈ ಪಾಣಾಜೆ ಕೇವಲ ಹಾಸ್ಯಕ್ಕೆ ಮಾತ್ರ ಸೀಮಿತವಾಗಿರದೆ ಒಟ್ಟು ಕಥೆಯ ಕೇಂದ್ರ ಬಿಂದು ಅವರಾಗಿದ್ದರು. ನಂದಿಕೇಶ್ವರ ನಾಟಕ ತಂಡದಿಂದ ತೊಡಗಿ ಇಂದಿನ ತನಕ ನೀಡಿದ ಹತ್ತು ಸಾವಿರಕ್ಕೂ ಅಧಿಕ ವೇದಿಕೆಗಳ ಅಭಿನಯದಲ್ಲಿನ ಅನುಭವವನ್ನು ಈ ನಾಟಕದಲ್ಲಿ ತನ್ನ ಪ್ರಧಾನ ಪಾತ್ರಭೂಮಿಕೆಯಲ್ಲಿ ಪ್ರಸ್ತುತಪಡಿಸಿದ್ದಾರೆ.

ಈ ನಾಟಕ ಶಾರದಾ ಆರ್ಟ್ಸ್ ನ ರಂಗ ಪಯಣದಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ

ಕಥೆಯ ಬಗ್ಗೆ ಹೇಳುವುದಿಷ್ಟೇ....

ನಿರ್ಧಾರ ತೆಗೆದುಕೊಳ್ಳಲಾಗದೆ...ಈ ಉಲ್ಲತ್ತಾ ಎಂದು ತನ್ನ ಸಂಸಾರದ ಹೊಣೆಯನ್ನು ತಾನು ನಂಬಿದವರ ಮೇಲೆ ಹೊರಿಸಿದಾಗ ಕೊನೆಯಲ್ಲಿ ಯಾನ್ ಉಲ್ಲೆತ್ತಾ ಎಂದು ಕೊಟ್ಟ ಮಾತನ್ನು ಉಳಿಸಿಕೊಂಡದ್ದಂತೂ ಸತ್ಯ......

                      ✒️ - ರಘುಪ್ರಸಾದ್ ಬಂದಿಯೋಡ್

ಆದರೆ....ಯಾರು, ಹೇಗೆ, ಯಾಕೆ, ಯಾವಾಗ, ಯಾವ ರೀತಿಯಲ್ಲಿ ಎಂಬುದನ್ನು ರಂಗ ಪ್ರದರ್ಶನದಲ್ಲೇ ನೋಡಿ.....

✨️ಸಭಾ ಕಾರ್ಯಕ್ರಮ ಇರುವುದಿಲ್ಲ✨️

Post a Comment

0 Comments
* Please Don't Spam Here. All the Comments are Reviewed by Admin.