ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನೂತನ ಅಡುಗೆ ಶಾಲೆ ಮತ್ತು ಅನ್ನಪೂರ್ಣ ಭೋಜನ ಶಾಲೆ ಉದ್ಘಾಟನೆ ನಾಳೆ.
October 14, 2023
0
ಮಂಜೇಶ್ವರ: ಉಪ್ಪಳ ಬಳಿಯ ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಅಡುಗೆ ಶಾಲೆ ಮತ್ತು ಅನ್ನಪೂರ್ಣ ಭೋಜನ ಶಾಲೆಯ ಉದ್ಘಾಟನಾ ಸಮಾರಂಭ ನಾಳೆ ಬೆಳಿಗ್ಗೆ 10 ಗಂಟೆಗೆ ಕ್ಷೇತ್ರದ ಸಭಾಂಗಣವಾದ ಶ್ರೀ ದುರ್ಗಾಪರಮೇಶ್ವರೀ ಕಲಾಭವನದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಆಶೀರ್ವಚನ ನೀಡಲಿರುವರು. ಬೆಂಗಳೂರಿನ ಉದ್ಯಮಿ ಗಿರೀಶ್ ರಾವ್ ನಿಧಿಮುಂಡ ಅಧ್ಯಕ್ಷತೆ ವಹಿಸಲಿರುವರು. ಮುಂಬೈ ಹೇರಂಬ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕರಾದ ರಘುರಾಮ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಲಿರುವರು. ಹೇರಂಬಾ ಆಗ್ರೋ ಇಂಡಸ್ಟ್ರೀಸ್ ಸ್ಥಾಪಕಧ್ಯಕ್ಷರು, ಕಾರ್ಯನಿರ್ವಾಹಕ ನಿರ್ದೇಶಕರಾದ ಸದಾಶಿವ ಶೆಟ್ಟಿ, ಕುಳೂರು ಕನ್ಯಾನ, ವಿವಿಧ ವಲಯಗಳ ಮುಂದಾಳುಗಳಾಗಿರುವ ಉಮೇಶ್ ಅಟ್ಟೆಗೋಳಿ, ಶ್ರೀಮತಿ ಮಲ್ಲಿಕಾ ಪ್ರಶಾಂತ್ ಪಕಳ ಕೋಡಿಬೈಲ್, ಡಾ. ರೋಷನ್ ಶೆಟ್ಟಿ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಪಿ.ಆರ್ ಶೆಟ್ಟಿ ಪೊಯ್ಯೇಲ್, ಶ್ರೀಧರ ಶೆಟ್ಟಿ ಮುಟ್ಟಂ, ವಿನೋದ್ ಪುತ್ತೂರು ಮೊದಲಾದವರು ಮುಖ್ಯ ಅತಿಥಿಗಳಾಗಿರುವರು. ಈ ವೇಳೆ
ಹಿರಿಯ ಧಾರ್ಮಿಕ ಚಿಂತಕ ತಿಂಬರ ಸುಬ್ರಾಯ ಹೊಳ್ಳ, ಕ್ಷೇತ್ರದ ಗೌರವಾಧ್ಯಕ್ಷರಾದ ಸಿ.ಎಸ್ ಕೃಷ್ಣಪ್ಪ ಐಲ, ಕ್ಷೇತ್ರದ ಪಾರಂಪರಿಕ ವಾದ್ಯ ವಾದಕರಾದ ಅನಂತಪದ್ಮನಾಭ ಐಲ ಇವರನ್ನು ಗೌರವಿಸಲಾಗುವುದು. ಕ್ಷೇತ್ರದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ಸ್ವಾಗತಿಸಲಿರುವರು, ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಮಜಲು ಶಂಕರನಾರಾಯಣ ಹೊಳ್ಳ ಧನ್ಯವಾದ ನೀಡಳಿರುವರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸವಿಜೀವನಂ ನೃತ್ಯ ಕಲಾ ಕ್ಷೇತ್ರ ಕೊಂಡೆವೂರು, ಉಪ್ಪಳ ಇವರ ನೃತ್ಯ ನಿರ್ದೇಶಕಿ ಶ್ರೀಮತಿ ಸವಿತಾ ಜೀವನ್ ಮತ್ತು ಶಿಷ್ಯ ವೃಂದದವರಿಂದ "ನೃತ್ಯಾಂತರಂಗ ಮತ್ತು ಮಾತೃದೇವೋಭ" ನೃತ್ಯ ರೂಪಕ ನಡೆಯಲಿದೆ.