ಐಲ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದ ಮೈದಾನವನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ, ಕ್ಷೇತ್ರದ ಸಭಾಂಗಣದಲ್ಲಿ "ಭಕ್ತರ ಸಮಾವೇಶ".
SHREE PADANGARE BHAGAVATHI KSHETRAJuly 21, 2024
0
ಉಪ್ಪಳ: ಐಲ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಮುಂಭಾಗದಲ್ಲಿರುವ ಐಲ ಮೈದಾನವನ್ನು ಸರಕಾರವು ವಿವಿಧ ಕಟ್ಟಡ ನಿರ್ಮಾಣಕ್ಕೆ ತೊಡಗಳು ನಿರ್ಧರಿಸಿದ್ದು, ಸದ್ರಿ ಕ್ಷೇತ್ರದ ಉತ್ಸವಗಳಲ್ಲಿ ಬೆಡಿ ಮಹೋತ್ಸವ, ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಹಾಗೂ ಪ್ರತೀ ತಿಂಗಳ ಸಂಕ್ರಮಣದಂದು ಕಟ್ಟೆ ಪೂಜೆ ಕೂಡಾ ನಡೆಯುತ್ತಿದೆ.
ಇದೀಗ ಸರಕಾರ ಕಟ್ಟಡ ಕಟ್ಟುವ ನೆಪದಲ್ಲಿ ಜಿಲ್ಲಾಧಿಕಾರಿ ಸಹಿತ ಆಗಮಿಸಿ ನಕ್ಷೆ ತಯಾರಿಸಿ ತೆರಳಿದ್ದು, ಮೈದಾನವನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸಿ ತೀರ್ಮಾನಿಸುವ ಸಲುವಾಗಿ ಕ್ಷೇತ್ರದ ಮಾಗಣೆ ಪ್ರಮುಖರ, ಆಡಳಿತ ಮಂಡಳಿ, ಸೇವಾ ಸಮಿತಿ ಹಾಗೂ ಊರಪರವೂರ ಸಮಸ್ತ ಭಕ್ತರ ಸಮಾವೇಶ ಕ್ಷೇತ್ರದ 'ಕಲಾಭವನ' ದಲ್ಲಿ ಇಂದು ಸಂಜೆ ನಡೆಯಿತು. ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮ ಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಮಂಗಳೂರು ನ್ಯಾಯವಾದಿ ಸುಬ್ಬಯ್ಯ ರೈ ಅಧ್ಯಕ್ಷತೆ ವಹಿಸಿದ್ದರು. ಬಾ.ಜ.ಪ ಜಿಲ್ಲಾ ಅಧ್ಯಕ್ಷ ರವೀಶ್ ತಂತ್ರಿ ಕುಂಟಾರು ಪ್ರಮುಖ ಭಾಷಣ ಮಾಡಿದರು.
ವೇದಿಕೆಯಲ್ಲಿ ಹಿರಿಯ ಸಾಹಿತಿ ಮಲಾರ್ ಜಯರಾಮ ರೈ, ಮಲಬಾರ್ ದೇವಸ್ವಂ ಬೋರ್ಡ್ ಏರಿಯಾ ಕಮಿಟಿ ಮೆಂಬರ್ ಶಂಕರ ರೈ ಮಾಸ್ಟರ್, ಬಾ.ಜ.ಪ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಶ್ರೀಕಾಂತ್, ಯು.ಡಿ.ಎಫ್ ಮಂಜೇಶ್ವರ ಮಂಡಲ ಸಂಚಾಲಕ ಮಂಜುನಾಥ ಆಳ್ವ ಮಡ್ಡ, ರಾ.ಸ್ವ. ಸೇ. ಸಂಘ ಕಣ್ಣೂರು ವಿಭಾಗ ಕಾರ್ಯವಾಹ ಲೋಕೇಶ ಜೋಡುಕಲ್ಲು, ಸಿ.ಪಿ.ಐ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲು, ಬಾ.ಜ.ಪ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ವಾನಂದೆ, ಬಾ.ಜ.ಪ ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್ ರೈ, ವಿ.ಹಿ.ಪ ಮಾತೃ ಶಕ್ತಿ ಕಣ್ಣೂರು ಪ್ರಮುಖ್ ಶ್ರೀಮತಿ ಮೀರಾ ಆಳ್ವ, ಐ.ಎನ್.ಟಿ.ಯು.ಸಿ ಮಂಜೇಶ್ವರ ಮಂಡಲ ಅಧ್ಯಕ್ಷ ಸತ್ಯನ್ ಸಿ, ಚಿಪ್ಪಾರು, ಅಮೇರಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರ ಅಶೋಕ್ ಪೂಜಾರಿ ಲಾಲ್ ಬಾಗ್, ಸಿ.ಪಿ.ಐ ಜಿಲ್ಲಾ ಕೌನ್ಸಿಲ್ ಸದಸ್ಯ ರಾಮಕೃಷ್ಣ ಕಡಂಬಾರು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಕ್ಷೇತ್ರದ ಆಡಳಿತ ಮೊಕೇಸರರ ಕೋಡಿಬೈಲು ನಾರಾಯಾಣ ಹೆಗ್ಡೆ ಸ್ವಾಗತಿಸಿ, ಮೋಹನದಾಸ್ ಐಲ ವಂದಿಸಿದರು.