Hot Widget


Qries
Type Here to Get Search Results !

Qries

ಐಲಮೈದಾನದಲ್ಲಿ ಸರಕಾರೀ ಕಛೇರಿನಿರ್ಮಾಣ| ಭಕ್ತರಿಂದ ಮೈದಾನದ ನವಕಟ್ಟೆಗಳಿಗೆ | ಸಂಕೀರ್ತನಾ ಪ್ರದಕ್ಷಿಣೆ |

  




ಮಾಗಣೆಕ್ಷೇತ್ರ ಐಲದ ಮೈದಾನ,ಐಲಮೈದಾನವನ್ನು ಸರಕಾರೀ ಕಛೇರಿನಿರ್ಮಾಣ ಸೇರಿದಂತೆ ಇನ್ನಿತರ ಉದ್ಧೇಶಗಳ ಮೂಲಕ ಇಲ್ಲವಾಗಿಸುವದಶಕಗಳ ಷಡ್ಯಂತ್ರ ಭಕ್ತ ಸಮೂಹದ ನಿರಂತರಪ್ರಯತ್ನಗಳಿಂದ ವಿಫಲವಾಗುತ್ತಿರುವುದು ನಮಗೆಲ್ಲಾ ವೇದ್ಯವಾಗಿರುವ ವಿಷಯ,

ಹಿಂದಿನಕಾಲದಲ್ಲಿ 60 ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಧರ್ಮನೇಮ,ಪ್ರತೀ ವರ್ಷ ನಡೆಯುತ್ತಿರುವ ಬೆಡಿ ಉತ್ಸವ ಸೇರಿದಂತೆದೇವಸ್ಥಾನ ಮತ್ತು ಇತರ ಹಿಂದೂ ಸಂಘಸಂಸ್ಥೆಗಳ ಅನೇಕ ಚಟುವಟಿಕೆಗಳ ಕೇಂದ್ರ ಐಲಕ್ಷೇತ್ರದ ಐಲಮೈದಾನದ ಅಸ್ಮಿತೆಯನ್ನು ಇನ್ನಷ್ಟು ದೃಢಗೊಳಿಸುವಲ್ಲಿ ಪ್ರತೀ ತಿಂಗಳ ಸಂಕ್ರಮಣದಂದು ಸಂಪ್ರದಾಯದಂತೆ ಮೈದಾನದಲ್ಲಿರುವ ಬೆಡಿಕಟ್ಟೆ ಸೇರಿದಂತೆ 9 ಕಟ್ಟೆಗಳಲ್ಲಿ ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ಕೆ ಇನ್ನಷ್ಟು ವೈಭವ ಸಂಭ್ರಮವನ್ನು ತುಂಬಬೇಕಾಗಿದೆ

ಈ ಹಿನ್ನೆಲೆಯಲ್ಲಿ ಬರುವ ಅಕ್ಟೋಬರ್ ತಿಂಗಳ 17 ರ ತುಲಾಸಂಕ್ರಮಣ ದಿನ ಗುರುವಾರ ಮಧ್ಯಾಹ್ನ 12.30ಕ್ಕೆ ಮಹಾಪೂಜೆಯ ನಂತರ ಐಲಕ್ಷೇತ್ರದಮೈದಾನ ಐಲಮೈದಾನದ ನವಕಟ್ಟೆಗಳಿಗೂ ಸಂಕೀರ್ತನಾ ಪ್ರದಕ್ಷಿಣೆ ಯ ಮೂಲಕ ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಲು ಯೋಜಿಸಲಾಗಿದೆ,

ಮಾಗಣೆಯ ಪ್ರತೀ ಭಜನಾತಂಡಗಳಿಂದಲೂ ಯಥಾಸಾಧ್ಯ ಭಜಕರು ಈ ಪುಣ್ಯಕಾರ್ಯದಲ್ಲಿ ಭಾಗಿಗಳಾಗಿ ಐಲದಮ್ಮನ ಮಣ್ಣು ಐಲದಮ್ಮನಲ್ಲೇ ಉಳಿಯುವಂತೆ ಮಾಡುವ ಪ್ರಯತ್ನದಲ್ಲಿ ಯಥಾಸಾಧ್ಯಸಹಭಾಗಿಗಳಾಗಿ ಕೃತಾರ್ಥರಾಗುವಿರಾಗಿ ವಿನಮ್ರವಾಗಿ ಅಪೇಕ್ಷಿಸುವ ಆಡಳಿತ ಮಂಡಳಿ ಮತ್ತು ಸೇವಾಸಮಿತಿ ಐಲಕ್ಷೇತ್ರ

Post a Comment

0 Comments
* Please Don't Spam Here. All the Comments are Reviewed by Admin.