ಐಲ ಕ್ಷೇತ್ರದ ವಿಷುಜಾತ್ರಾಮಹೋತ್ಸವದ ಪ್ರಯುಕ್ತ ಭಕ್ತಜನರ ಸಭೆಯು 12-01-25 ಆದಿತ್ಯವಾರ ಸಂಪನ್ನಗೊಂಡಿತು ಕ್ಷೇತ್ರದ ಕಳೆದವರ್ಷದ ಚಟುವಟಿಕೆಗಳ ವರದಿ,ವಾರ್ಷಿಕಲೆಕ್ಕಪತ್ರ ಮಂಡಿಸಲ್ಪಟ್ಟಿತು,ಮುಂದಿನ ಬಿಂಬಪ್ರತಿಷ್ಠಾಪನಾ ದಿನ,ವಾರ್ಷಿಕ ವಿಷು ಜಾತ್ರಾಮಹೋತ್ಸವದ ಚರ್ಚಿಸಲಾಯಿತುಭಾಗವಹಿಸಿದ ಭಕ್ತಬಂಧುಗಳೆಲ್ಲರಿಗೂ ಮಲ್ಲಿಗೆ ಸಸಿಯನ್ನು ವಿತರಿಸಲಾಯಿತು,ಜಾತ್ರಾಮಹೋತ್ಸವ ಅನ್ನಸಂತರ್ಪಣಾ ಸೇವೆಯನ್ನು ಸಮರ್ಪಿಸುವರೇ ಬಿಂಬಪ್ರತಿಷ್ಠಾಪನಾ ದಿನದಂದು ಕೋಡಿಬೈಲು ಗ್ರಾಮಸ್ಥರು,ಧ್ವಜಾರೋಹಣದಿನ ಕುಳೂರುಗ್ರಾಮಸ್ಥರು,ವಿಷು ಕಣಿದಿನ ಐಲಗ್ರಾಮಸ್ಥರು,ನಡು ದೀಪೋತ್ಸವ ದಿನ ಶಾರದಾನಗರ ಉಪ್ಪಳ ಭಗವತೀ ಗ್ರಾಮಸ್ಥರು,ಬೆಡಿಉತ್ಸವದಂದು ವಾಮಂಜೂರು ಶ್ರೀ ಗುತ್ಯಮ್ಮ ಭಗವತೀ ಕ್ಷೇತ್ರ,ಆರಾಟ ಉತ್ಸವದಿನ ಉಪ್ಪಳ,ಪಚ್ಲಂಪಾರೆ,ಮುಳಿಂಜ,ಕೊಂಡೆವೂರು ಗ್ರಾಮಸ್ಥರಿಗೆ ಅಪೇಕ್ಷಿಸಲಾಯಿತು,ಸಾಂಪ್ರದಾಯಿಕ ಉತ್ಸವಕಾರ್ಯಕ್ರಮಗಳ ಜತೆಯಲ್ಲಿ ಸಾಮೂಹಿಕ ಸರ್ವಮಂಗಲಮಂಗಲ್ಯೇ ಸ್ತುತಿ ಪಾರಾಯಣ ನಡೆಸಲು ತೀರ್ಮಾನಿಸಲಾಯಿತುಭಜನಾಸೇವೆಯಲ್ಲಿ ಮಾಗಣೆಯ ಪ್ರತೀ ಗ್ರಾಮಗಳನ್ನು ಜೋಡಿಸುವರೇ ಚಿಂತನೆ ನಡೆಯಿತು,ಜಾತ್ರೆಯಸಂದರ್ಭದಲ್ಲಿ ಯುವದಂಪತಿ ಸಮಾವೇಶ ನಡೆಸುವರೇ ತೀರ್ಮಾನಿಸಲಾಯಿತುಬೆಡಿ ಉತ್ಸವದಿನ ಐಲ ಶ್ರೀ ದುರ್ಗಾಪರಮೇಶ್ವರೀ ಮೈದಾನದಲ್ಲಿ ಸಂಪನ್ನಗೊಳ್ಳಲಿರುವ ವಿರಾಟ್ ನೃತ್ಯಭಜನಾ ಸಂಭ್ರಮದಲ್ಲಿ ಪಾಲ್ಗೊಳ್ಳುವ ನೃತ್ಯಭಜನಾ ತಂಡಗಳು ತಕ್ಷಣವೇ ಹೆಸರು ನೋಂದಾಯಿಸುವರೇ ಅಪೇಕ್ಷಿಸಲಾಯಿತುಉತ್ಸವದ ಆಮಂತ್ರಣ ಪತ್ರಿಕೆಯನ್ನು ಮಾಗಣೆಯ ಪ್ರತೀ ಮನೆಗೂ ತಲುಪಿಸುವಬಗ್ಗೆ ಚಿಂತನೆ ನಡೆಯಿತು,ಜನವರಿ 26 ರಂದು ಶೀರೂರಿನಿಂದ ಕಣ್ಣೂರು ತನಕ ಕಡಲಕಿನಾರೆಯ 108 ಕೇಂದ್ರಗಳಲ್ಲಿ ಏಕಕಾಲದಲ್ಲಿ ಸಂಪನ್ನಗೊಳ್ಳಲಿರುವ ವಿಷ್ಣು ಸಹಸ್ರನಾಮ ಸ್ತೋತ್ರಪಠಣದ ಯಶಸ್ಸಿನ ಬಗ್ಗೆ ಚರ್ಚೆ ನಡೆಯಿತುಪ್ರತೀ ಸಂಕ್ರಮಣದಂದು ಐಲಶ್ರೀ ದುರ್ಗಾಪರಮೇಶ್ವರಿ ಮೈದಾನದನವಕಟ್ಟೆಗಳಿಗೆ ನಡೆಯುವ ಸಂಕೀರ್ತನಾಪ್ರದಕ್ಷಿಣೆಯನ್ನು ಯಶಸ್ವಿಗೊಳಿಸುವರೇ ಚರ್ಚಿಸಲಾಯಿತುವೇದಿಕೆಯಲ್ಲಿ ಆಡಳಿತ ಮೊಕ್ತೇಸರರಾದ ಶ್ರೀ ಕೋಡಿಬೈಲು ನಾರಾಯಣಹೆಗ್ಡೆ,ಆಡಳಿತಮಂಡಳಿ ಸದಸ್ಯರಾದ ಶ್ರೀ ಶಿವರಾಮಪಕ್ಕಳ,ಡಾ ಶ್ರೀರಾಜ್ಸೇವಾಸಮಿತಿ ಗೌರವಾಧ್ಯಕ್ಷರಾದ ಶ್ರೀ ಸಿ ಯಸ್ ಕೃಷ್ಣಪ್ಪ ಐಲಮೈದಾನ್,ಅಧ್ಯಕ್ಷರಾದ ಶ್ರೀ ಲಕ್ಷ್ಮಣ್ ಕುಂಬ್ಳೆ,ಅರ್ಚಕರಾದ ಶ್ರೀ ಶಿವಾನಂದ ಮಯ್ಯ,ಶ್ರೀ ರಾಮಪ್ರಕಾಶ್ ಆಳ್ವ,ಶ್ರೀಮತಿ ಜಯಲಕ್ಷ್ಮಿ ಕಾರಂತ್ ಉಪಸ್ಥಿತರಿದ್ದರು,ಸಭೆಯಲ್ಲಿ ಅರ್ಚಕರಾದ ಶ್ರೀ ಅರುಣ್ ಮಯ್ಯ, ಸೇವಾಸಮಿತಿಯ ಸದಸ್ಯರುಗಳು,ವಿವಿಧ ದೇವಸ್ಥಾನ,ಭಜನಾಮಂದಿರ,ಸಂಘಸಂಸ್ಥೆಗಳ ಪ್ರಮುಖರು,ತಾಯಂದಿರು ಸಜ್ಜನರು ಸೇರಿದಂತೆ ಮಾಗಣೆಯ ಭಕ್ತ ಸಮೂಹ ಸೇರಿತ್ತು,ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣಹೆಗ್ಡೆಯವರು ಸ್ವಾಗತ ಮತ್ತು ಪ್ರಸ್ತಾವನೆಗೈದು,ಶ್ರೀ ಶಿವಾರಾಮಪಕ್ಕಳ ವಂದಿಸಿದರುಭ್ರಾಮರಿ ಭಜನಾತಂಡದ ಪುಟಾಣಿಗಳು ಪ್ರಾರ್ಥನೆ ಮಾಡಿದರು,
ಐಲ ಕ್ಷೇತ್ರದ ವಿಷುಜಾತ್ರಾಮಹೋತ್ಸವದ ಪ್ರಯುಕ್ತ ಭಕ್ತಜನರ ಸಭೆಯು 12-01-25 ಆದಿತ್ಯವಾರ ಸಂಪನ್ನಗೊಂಡಿತು.
January 13, 2025
0