ಮಂಗಳೂರು-ಕಾಸರಗೋಡು ಹೆದ್ದಾರಿ ಹದಿನೇಳರಲ್ಲಿ, ಉಪ್ಪಳದಿಂದ ಮುಂದೆ, ಬಲಭಾಗಕ್ಕೆ ತಿರುಗುವ ರಸ್ತೆಯಲ್ಲೇ "ಐಲ ದುರ್ಗಾಪರಮೇಶ್ವರೀ ದೇವಿ" ಯ ಹೆಸರನ್ನು ಹೊತ್ತ ಕಮಾನು ಎದುರಾಗುತ್ತದೆ. ಇದೇ ರಸ್ತೆಯಲ್ಲಿ ಪಶ್ಚಿಮಕ್ಕೆ ಸುಮಾರು ಅರ್ಧಮೈಲು ಮುಂದುವರಿದರೆ, ಈ ದೇವಾಲಯವಿದೆ. ಕಾಸರಗೋಡು ತಾಲೂಕು ಉಪ್ಪಳ ಗ್ರಾಮದಲ್ಲಿರುವ ಈ ಪ್ರಾಚೀನ ದೇವಾಲಯಕ್ಕೆ ಸಂಭಂದಿಸಿದ ಸ್ಥಳ ಪುರಾಣ ಕುತೂಹಲ ಹುಟ್ಟಿಸುತ್ತದೆ.ಜನರ ಆಡು ಮಾತಿನಲ್ಲಿ (ತುಳು) ಐಲವೆಂದೇ ಪ್ರಸಿದ್ಧವಾದ ಈ ಸ್ಥಳಕ್ಕೇ 'ವೇಲಾಪುರ'ವೆಂದು ಹೆಸರು. 'ವೇಲಾಪುರ'ವೆಂದರೆ, ಇಲ್ಲಿ ಹೇಳುವುದು ಕುಂಬಳೆ-ಬದಿಯಡ್