Breaking Posts

6/trending/recent
Trulli
Type Here to Get Search Results !

ಕ್ಷೇತ್ರದ ರಾಮಾಯಣ ಮಾಸಾಚರಣೆಯಂಗವಾಗಿ ದಿನಕ್ಕೊಂದು ಶ್ರೀರಾಮ ಕಥೆಯ ಪ್ರಥಮ ದಿನ ನಿನ್ನೆ ಶ್ರೀಮತಿಜಯಲಕ್ಷ್ಮೀ ಕಾರಂತ್ ಮಂಗಲ್ಪಾಡಿ ಇವರು ರಾಮಾವತಾರ ಕಥಾಭಾಗವನ್ನು ಪ್ರಸ್ತುತ ಪಡಿಸಿದರು

 ಕ್ಷೇತ್ರದ ರಾಮಾಯಣ ಮಾಸಾಚರಣೆಯಂಗವಾಗಿ ದಿನಕ್ಕೊಂದು ಶ್ರೀರಾಮ ಕಥೆಯ ಪ್ರಥಮ ದಿನ ನಿನ್ನೆ ಶ್ರೀಮತಿಜಯಲಕ್ಷ್ಮೀ ಕಾರಂತ್ ಮಂಗಲ್ಪಾಡಿ ಇವರು ರಾಮಾವತಾರ ಕಥಾಭಾಗವನ್ನು ಪ್ರಸ್ತುತ ಪಡಿಸಿದರು





ಕ್ಷೇತ್ರದ ಪವಿತ್ರಪಾಣಿಗಳಾದ ಡಾ ಅಶೋಕ ಪದಕಣ್ಣಾಯರು,ಮಾಗಣೆ ಪ್ರಮುಖರಾದ ಶ್ರೀ ಸುರೇಶ್ ಕುಬಣೂರಾಯ,ಶ್ರೀ ಕೆ ಶ್ರೀನಿವಾಸ್ ಕುಬಣೂರಾಯ,ಆಡಳಿತಮೊಕ್ತೇಸರರಾದ ಶ್ರೀಕೋಡಿಬೈಲು ನಾರಾಯಣಹೆಗ್ಡೆಯವರು, ,ಬಾಯಿಕಟ್ಟೆ ಅಯ್ಯಪ್ಪ ಭಜನಾಮಂದಿರದ ಪ್ರಮುಖರು ಮತ್ತುಗೀತಾಜ್ಞಾನ ಯಜ್ಞ ಬಳಗದ ಶ್ರೀ ಸುದರ್ಶನ ಪಾಣಿ ಬಲ್ಲಾಳ್ ಇವರುಗಳು ದೀಪಪ್ರಜ್ವಲನೆ ಗೈದರು,
ಸೇವಾಸಮಿತಿಯ ಪ್ರಧಾನಕಾರ್ಯದರ್ಶಿ  ಶ್ರೀ ವಸಂತಮಯ್ಯ ಸ್ವಾಗತಿಸಿ,ಕ್ಷೇತ್ರದ ಸಕ್ರಿಯ ಕಾರ್ಯಕರ್ತೆ ಶ್ರೀಮತಿ ಲಿಕ್ಷಿತಾಸದಾಶಿವ ಐಲ ವಂದಿಸಿದರು,
ಪುಟಾಣಿಗಳಾದ ವಿದುನ,ಧೃತ್ಯ,ಶ್ರೀಮಯಿ,ಯೋಗಶ್ರೀ,ಯಶ್ವಿನ್ ಇವರುಗಳು ಪ್ರಾರ್ಥನೆ ಹಾಡಿದರು,
ಕಥಾಪೂರ್ವದಲ್ಲಿ
ಶ್ರೀ ದುರ್ಗಾಮಾತೃಶಕ್ತಿ ಐಲ ಇವರಿಂದ ಭಜನೆ, ಗೀತಾಜ್ಞಾನ ಯಜ್ಞ ಬಳಗದಿಂದ ಭಗವದ್ಗೀತಾಪಾರಾಯಣ ಸಂಪನ್ನಗೊಂಡಿತು,ಗಣ್ಯರ ಸಮ್ಮುಖದಲ್ಲಿ ಶ್ರೀಮತಿ ರಂಜಿನಿ ಕೃಷ್ಣ ಐಲ ಇವರು ಶ್ರೀಮತಿ ಜಯಲಕ್ಷ್ಮೀ ಕಾರಂತ್ ಇವರನ್ನು ಗೌರವಿಸಿದರು,
ಸೇವಾಸಮಿತಿಯ ಅಧ್ಯಕ್ಷರಾದ ಸುಧೀಶ್ಚಂದ್ರ ಶೆಟ್ಟಿಇಚ್ಲಂಗೋಡು,ಸೇವಾಸಮಿತಿಯಪದಾಧಿಕಾರಿಗಳು,ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಬಂಧುಗಳು ಸೇರಿದ್ದರು
ಶ್ರೀಮತಿ ಸುಜಾತ ಐಲ ಲಘು ಉಪಾಹಾರ ಪ್ರಾಯೋಜಿಸಿದರು ಪ್ರಥಮದಿನದ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದ ಸರ್ವರಿಗೂ ಕ್ಷೇತ್ರದ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳು

Post a Comment

0 Comments
* Please Don't Spam Here. All the Comments are Reviewed by Admin.

Top Post Ad

///////////////////////////////////////////////////////////////////////////////////